ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸ್ಮಾರಕ
ಸುದ್ದಿ: 5 ವರ್ಷಗಳ ಹಿಂದೆ (ಜೂನ್ 2020) ಚೀನಿ ಸೈನಿಕರೊಂದಿಗೆ ಭೀಕರ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅನಾವರಣಗೊಳಿಸಿದರು.
ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ನಿರ್ಮಾಣಗೊಂಡ ಯುದ್ಧ ಸ್ಮಾರಕ
'ಭಾರತ ರಣಭೂಮಿ ದರ್ಶನ' ಉಪಕ್ರಮದಡಿ ಸ್ಮಾರಕವನ್ನು ಅಭಿವೃದ್ಧಿಗೊಳಿಸಲಾಗಿದೆ.
ಲಡಾಖ್ ನ ಆಯಕಟ್ಟಿನ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯಲ್ಲಿ ಕೆಎಂ-120 ಪೋಸ್ಟ್ ನ ಬಳಿ ಸ್ಮಾರಕವು ತಲೆಯೆತ್ತಿದ್ದು, ಇದು ವಿಶ್ವದ ಅತ್ಯಂತ ಕಠಿಣ ಮಿಲಿಟರಿ ನಿಯೋಜನೆ ವಲಯಗಳಲ್ಲಿ ಒಂದಾಗಿದೆ.
ಗಾಲ್ವಾನ್ ಕಣಿವೆ :
ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯ (LAC) ಪಶ್ಚಿಮ ವಲಯದಲ್ಲಿ ಗಾಲ್ವಾನ್ ಕಣಿವೆ ಇದೆ. ಈ ಕಣಿವೆಯು ಉತ್ತರಕ್ಕೆ ಕಾರಕೋರಂ ಶ್ರೇಣಿ ಸೇರಿದಂತೆ ಒರಟಾದ ಭೂಪ್ರದೇಶದಿಂದ ಆವೃತವಾಗಿದೆ. ಭಾರತ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾದ ಅಕ್ಸಾಯ್ ಚಿನ್ ಬಳಿ ಇದೆ.