SEARCH

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policies, and Terms of Service.

    ಭಾರತದ ಸಂವಿಧಾನ ಎರವಲು(Drawn) ಪ್ರಮುಖ ಲಕ್ಷಣಗಳು

    5 days ago

    ಭಾರತದ ಸಂವಿಧಾನವು ಪ್ರಪಂಚದ ವಿವಿಧ ಸಂವಿಧಾನಗಳಿಂದ ಮತ್ತು 1935 ರ ಭಾರತ ಸರ್ಕಾರ ಕಾಯ್ದೆಯಿಂದ ಅನೇಕ ಪ್ರಮುಖ ಲಕ್ಷಣಗಳನ್ನು ಎರವಲು ಪಡೆದಿದೆ.

    ವಿವಿಧ ದೇಶಗಳಿಂದ ಅಳವಡಿಸಿಕೊಳ್ಳಲಾದ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:

    ಬ್ರಿಟಿಷ್ ಸಂವಿಧಾನದಿಂದ: ಸಂಸದೀಯ ಸರ್ಕಾರ, ಕಾನೂನಿನ ಆಳ್ವಿಕೆ, ಶಾಸನೀಯ ಪ್ರಕ್ರಿಯೆ, ಏಕ ಪೌರತ್ವ, ಕ್ಯಾಬಿನೆಟ್ ವ್ಯವಸ್ಥೆ, ವಿಶೇಷ ರಿಟ್‌ಗಳು (Prerogative Writs), ಸಂಸದೀಯ ಸವಲತ್ತುಗಳು ಮತ್ತು ದ್ವಿಸದನ ಪದ್ಧತಿಯನ್ನು ಭಾರತದ ಸಂವಿಧಾನವು ಅಳವಡಿಸಿಕೊಂಡಿದೆ.

    ಅಮೆರಿಕ ಸಂಯುಕ್ತ ಸಂಸ್ಥಾನದ (US) ಸಂವಿಧಾನ: ಮೂಲಭೂತ ಹಕ್ಕುಗಳು, ನ್ಯಾಯಾಂಗದ ಸ್ವಾತಂತ್ರ್ಯ, ನ್ಯಾಯಾಂಗ ವಿಮರ್ಶೆ, ರಾಷ್ಟ್ರಪತಿಗಳ ಮಹಾಭಿಯೋಗ (Impeachment), ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ಪದಚ್ಯುತಿ ಹಾಗೂ ಉಪರಾಷ್ಟ್ರಪತಿ ಹುದ್ದೆಯನ್ನು ಅಮೆರಿಕದಿಂದ ಪಡೆಯಲಾಗಿದೆ.

    ಐರಿಶ್ ಸಂವಿಧಾನ: ರಾಜ್ಯ ನಿರ್ದೇಶಕ ತತ್ವಗಳು (DPSP), ರಾಜ್ಯಸಭೆಗೆ ಸದಸ್ಯರ ನಾಮನಿರ್ದೇಶನ ಮತ್ತು ರಾಷ್ಟ್ರಪತಿ ಚುನಾವಣಾ ವಿಧಾನವನ್ನು ಎರವಲು ಪಡೆಯಲಾಗಿದೆ.

    ಕೆನಡಾ ಸಂವಿಧಾನ: ಬಲವಾದ ಕೇಂದ್ರದೊಂದಿಗೆ ಒಕ್ಕೂಟ ವ್ಯವಸ್ಥೆ, ಕೇಂದ್ರದಲ್ಲಿ ಶೇಷ ಅಧಿಕಾರಗಳು (Residuary Powers), ಕೇಂದ್ರದಿಂದ ರಾಜ್ಯಪಾಲರ ನೇಮಕ ಮತ್ತು ಸುಪ್ರೀಂ ಕೋರ್ಟ್‌ನ ಸಲಹಾ ಅಧಿಕಾರ ವ್ಯಾಪ್ತಿಯನ್ನು ಅಳವಡಿಸಿಕೊಳ್ಳಲಾಗಿದೆ.

    ಆಸ್ಟ್ರೇಲಿಯಾ ಸಂವಿಧಾನ: ಸಮವರ್ತಿ ಪಟ್ಟಿ (Concurrent List), ವಾಣಿಜ್ಯ ಮತ್ತು ಸಂಪರ್ಕದ ಸ್ವಾತಂತ್ರ್ಯ ಹಾಗೂ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಪಡೆಯಲಾಗಿದೆ.

    ಜರ್ಮನಿಯ ವೈಮರ್ (Weimar) ಸಂವಿಧಾನ: ತುರ್ತು ಪರಿಸ್ಥಿತಿಯ ಸಮಯದಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದೆ.

    ಸೋವಿಯತ್ (USSR) ಸಂವಿಧಾನ: ಮೂಲಭೂತ ಕರ್ತವ್ಯಗಳು ಮತ್ತು ಪೀಠಿಕೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಆದರ್ಶಗಳನ್ನು ಪಡೆಯಲಾಗಿದೆ.

    ಫ್ರೆಂಚ್ ಸಂವಿಧಾನ: ಗಣರಾಜ್ಯ ವ್ಯವಸ್ಥೆ ಹಾಗೂ ಪೀಠಿಕೆಯಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳನ್ನು ಎರವಲು ಪಡೆಯಲಾಗಿದೆ.

    ದಕ್ಷಿಣ ಆಫ್ರಿಕಾ ಸಂವಿಧಾನ: ಸಂವಿಧಾನದ ತಿದ್ದುಪಡಿ ಪ್ರಕ್ರಿಯೆ ಮತ್ತು ರಾಜ್ಯಸಭಾ ಸದಸ್ಯರ ಚುನಾವಣಾ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

    ಜಪಾನ್ ಸಂವಿಧಾನ: ಕಾನೂನಿನಿಂದ ಸ್ಥಾಪಿತವಾದ ಪ್ರಕ್ರಿಯೆಯನ್ನು (Procedure Established by Law) ಪಡೆಯಲಾಗಿದೆ.

    ಭಾರತ ಸರ್ಕಾರ ಕಾಯ್ದೆ, 1935 : ಫೆಡರಲ್ ಯೋಜನೆ, ರಾಜ್ಯಪಾಲರ ಹುದ್ದೆ, ನ್ಯಾಯಾಂಗ ವ್ಯವಸ್ಥೆ, ಲೋಕಸೇವಾ ಆಯೋಗಗಳು, ತುರ್ತುಪರಿಸ್ಥಿತಿ ನಿಬಂಧನೆಗಳು ಮತ್ತು ಆಡಳಿತಾತ್ಮಕ ವಿವರಗಳನ್ನು ಸಂವಿಧಾನವು ಅಳವಡಿಸಿಕೊಂಡಿದೆ

    Click here to Read More
    Previous Article
    ಕರ್ನಾಟಕ - ತಮಿಳುನಾಡು ರಾಜ್ಯಗಳ ನಡುವೆ ದಕ್ಷಿಣ ಪಿನಾಕಿನಿ ನದಿ ವಿವಾದ (Pinakini)
    Next Article
    Solid Waste Management (SWM) Rules, 2026

    Related ಭಾರತದ ಸಂವಿಧಾನ (IC) Updates:

    Comments (0)

      Leave a Comment