Language Settings
Select Website Language
Uttirn

NCRB ಭಾರತದಲ್ಲಿ ಅಪರಾಧ–2024

2 hours ago

ಭ್ರಷ್ಟಾಚಾರ | ರಾಜ್ಯಕ್ಕೆ 3ನೇ ಸ್ಥಾನ: ಮೊದಲೆರಡರಲ್ಲಿ ಮಹಾರಾಷ್ಟ್ರ, ತಮಿಳುನಾಡು

ದೇಶದಲ್ಲೇ ಅತಿಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.

2024ರಲ್ಲಿ ಮಹಾರಾಷ್ಟ್ರದಲ್ಲಿ 721, ತಮಿಳುನಾಡಿನಲ್ಲಿ 364 ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 334 ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ‘ಭಾರತದಲ್ಲಿ ಅಪರಾಧ–2024’ ವರದಿಯನ್ನು ಈಚೆಗೆ ಬಿಡುಗಡೆ ಮಾಡಿದೆ. ದೇಶದಾದ್ಯಂತ ಒಟ್ಟು 4,053 ಭ್ರಷ್ಟಾಚಾರ ಸಂಬಂಧಿ ಪ್ರಕರಣಗಳು ದಾಖಲಾಗಿವೆ ಎಂದು ದತ್ತಾಂಶ ನೀಡಿದೆ. ಈ ಪೈಕಿ ರಾಜ್ಯದ ಪ್ರಕರಣಗಳ ಪಾಲು ಶೇ 8.3ರಷ್ಟಾಗುತ್ತದೆ.

ರಾಜ್ಯದ 334ರ ಪೈಕಿ, ಲಂಚ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿ–ಸಿಬ್ಬಂದಿಯನ್ನು ಬಂಧಿಸಿದ ಪ್ರಕರಣಗಳ ಸಂಖ್ಯೆ 237ರಷ್ಟಿದೆ. ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ 75, ಅಪರಾಧಿಕ ಕರ್ತವ್ಯಲೋಪದ 17 ಮತ್ತು ಇತರೆ 5 ಪ್ರಕರಣಗಳು ದಾಖಲಾಗಿವೆ. 

 

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದ 2025ನೇ ಸಾಲಿನ ಭ್ರಷ್ಟಾಚಾರ ಪರಿಕಲ್ಪನಾ ಸೂಚ್ಯಂಕದಲ್ಲಿ ಜಗತ್ತಿನ 182 ದೇಶಗಳ ಪೈಕಿ ಭಾರತ 91ನೇ ಸ್ಥಾನದಲ್ಲಿದೆ. ಇದು ಕಳೆದ ವರ್ಷಕ್ಕೆ ವೊಲಿಸಿದರೆ ಭ್ರಷ್ಟಾಚಾರ ನಿಗ್ರಹದಲ್ಲಿ ಭಾರತ ತುಸು ಯಶ ಕಂಡಿದೆ.

 

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 2024ರಲ್ಲಿ ಒಟ್ಟು 100 ಅಂಕಗಳ ಪೈಕಿ 38 ಅಂಕ ಪಡೆದಿತ್ತು. ಈ ವರ್ಷ 39 ಅಂಕಗಳೊಂದಿಗೆ 1 ಅಂಕ ಹೆಚ್ಚಿಗೆ ಪಡೆದುಕೊಂಡಿದೆ.

 

ಭಾರತ 2024ರಲ್ಲಿ 96ನೇ ಸ್ಥಾನದಲ್ಲಿತ್ತು, ಈ ವರ್ಷ 91ನೇ ಸ್ಥಾನಕ್ಕೆ ಜಿಗಿದಿದೆ. ಇದು ಉತ್ತಮ ಬೆಳವಣಿಗೆ ಎಂದು ಬರ್ಲಿನ್ ಮೂಲದ ಭ್ರಷ್ಟಾಚಾರ ವಿರೋಧಿ ಕಾವಲು ಸಂಸ್ಥೆಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಹೇಳಿದೆ.

 

182 ದೇಶಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಸಮೀಕ್ಷೆ ನಡೆಸುವ ಜಾಗತಿಕ ಎನ್​ಜಿಒ ಸಂಸ್ಥೆ, ಭ್ರಷ್ಟಾಚಾರವು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಗಂಭೀರ ಬೆದರಿಕೆಯಾಗಿ ಉಳಿದಿದೆ. ಆದರೂ, ಕೆಲವೆಡೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ. ಇದು ಉತ್ತಮ ಚಿಹ್ನೆಗಳು ಎಂದು ಅಭಿಪ್ರಾಯಪಟ್ಟಿದೆ.

 

ಏಷ್ಯಾ ಪೆಸಿಫಿಕ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನಗಳಲ್ಲಿ ನಿಧಾನಗತಿಯ ಬೆಳವಣಿಗೆ ಕಂಡುಬಂದಿದೆ. ಹಿಂದಿನ ವರ್ಷ ಅನೇಕ ದೇಶಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದವು. ಹೀಗಾಗಿ, ಅಲ್ಪ ಬದಲಾವಣೆ ಕಂಡಿವೆ ಎಂದು ಸಂಸ್ಥೆಯ ವರದಿ ತಿಳಿಸಿದೆ.

 

ಡೆನ್ಮಾರ್ಕ್ ನಲ್ಲಿ ಅತ್ಯಂತ ಕಡಿಮೆ ಭ್ರಷ್ಟಾಚಾರ

ಡೆನ್ಮಾರ್ಕ್ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಭ್ರಷ್ಟಾಚಾರ ಇರುವ ದೇಶವಾಗಿದೆ. ಇದು ಹಲವು ವರ್ಷಗಳಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಳಿಕ ಫಿನ್​​ಲ್ಯಾಂಡ್​​, ಸಿಂಗಾಪುರಗಳಿವೆ.

 

ದಕ್ಷಿಣ ಸುಡಾನ್ ಅತ್ಯಂತ ಭ್ರಷ್ಟ ದೇಶ

 

ಅತ್ಯಂತ ಹೆಚ್ಚು ಭ್ರಷ್ಟ ದೇಶಗಳಲ್ಲಿ ದಕ್ಷಿಣ ಸುಡಾನ್ ಮತ್ತು ಸೊಮಾಲಿಯಾ, ವೆನೆಜುವೆಲಾಗಳಿವೆ. ವಿಶ್ವದ ಅತಿ ಶ್ರೀಮಂತ ರಾಷ್ಟ್ರವಾದ ಅಮೆರಿಕ 29ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್​ 20ನೇ ಸ್ಥಾನ ಪಡೆದಿದೆ. ಇನ್ನು, ಭಾರತದ ಸುತ್ತಲಿನ ರಾಷ್ಟ್ರಗಳಾದ ಪಾಕಿಸ್ತಾನ 135, ಶ್ರೀಲಂಕಾ 121, ಚೀನಾ 76ನೇ ಸ್ಥಾನದಲ್ಲಿವೆ.

 

ವಿಶ್ವದ 182 ದೇಶಗಳಲ್ಲಿನ ಭ್ರಷ್ಟಾಚಾರದ ಆಧಾರದ ಮೇಲೆ ಸಿಪಿಐ ಅಂಕ, ಕ್ರಮಾಂಕಗಳನ್ನು ನೀಡುತ್ತದೆ. 0 ಅತಿ ಭ್ರಷ್ಟವಾದರೆ, 100 ಅತಿ ಸ್ವಚ್ಛ ಎಂದು ಪರಿಗಣಿಸಲಾಗುತ್ತದೆ.

 

Click here to Read More
Previous Article
Yildirimhan Missile

Related ಪ್ರಚಲಿತ ಘಟನೆಗಳು (CAs) Updates:

Are you sure? You want to delete this comment..! Remove Cancel

Comments (0)

    Leave a comment