Language Settings
Select Website Language
Uttirn
uttirn

ಚಂದ್ರಯಾನ–3ಕ್ಕೆ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ (Goddard Astronautics Award)

2 hours ago

News : ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ಮಿಷನ್‌ಗೆ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪರವಾಗಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಪ್ರಶಸ್ತಿ ಸ್ವೀಕರಿಸಿದರು.

ಗಾಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿ?

ಗಾಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯು ಬಾಹ್ಯಾಕಾಶ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.

ರಾಕೆಟ್ ದಾರ್ಶನಿಕ, ಪ್ರವರ್ತಕ, ಸಾಹಸಿ ಪ್ರಯೋಗಶೀಲ ಮತ್ತು ಎಂಜಿನಿಯರ್ ಆಗಿದ್ದ ರಾಬರ್ಟ್ ಎಚ್. ಗಾಡಾರ್ಡ್ ಅವರ ನೆನಪಿಗಾಗಿ ಅವರ ಪತ್ನಿ ಗಾಡಾರ್ಡ್ ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ರಾಬರ್ಟ್ ಅವರ ಆರಂಭಿಕ ದ್ರವ ರಾಕೆಟ್ ಎಂಜಿನ್ ಉಡ್ಡಯನಗಳು ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದವು.

1975ರಲ್ಲಿ ಈ ಪ್ರಶಸ್ತಿಯು ತನ್ನ ಪ್ರಸ್ತುತ ಸ್ವರೂಪ ಪಡೆದುಕೊಂಡಿತು. ಆಗ ಸಂಸ್ಥೆಯು ತನ್ನ ಹಳೆಯ ‘ಗಾಡಾರ್ಡ್ ಪ್ರಶಸ್ತಿ’ಯ (ಇದು ಪ್ರೊಪಲ್ಷನ್ ಮತ್ತು ಎನರ್ಜಿ ಕನ್ವರ್ಶನ್ ಎಂಜಿನಿಯರಿಂಗ್ ವಿಜ್ಞಾನದ ಕೊಡುಗೆಗಾಗಿ ನೀಡಲಾಗುತ್ತಿತ್ತು) ಹೆಸರನ್ನು ಬದಲಾಯಿಸಿ, ಅದರ ಆಯ್ಕೆಯ ಮಾನದಂಡಗಳನ್ನು ವಿಸ್ತರಿಸಿತು.