Language Settings
Select Website Language
uttirn
uttirn

ಕಲಬುರಗಿ ಮೃಗಾಲಯ(Zoo)

1 hour ago

News : ಚಿತ್ತಾಪುರ ಕ್ಷೇತ್ರದ ಸೇಡಂ-ಕಲಬುರಗಿ ನಡುವಿನ ಹೆದ್ದಾರಿಯ ಪಕ್ಕದ ಮಾಡಬೂಳ ಬಳಿ 35 ಕೋಟಿ ರೂ. ವೆಚ್ಚದಲ್ಲಿ 43 ಎಕರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕಲಬುರಗಿ ಮೃಗಾಲಯವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಪ್ರಮುಖ ಅಂಶಗಳು: 

ರಾಜ್ಯದ 9ನೇ ಮೃಗಾಲಯ ಹಾಗೂ ಮಕ್ಕಳ ಉದ್ಯಾನವನ

ಇದು ಕಲ್ಯಾಣ ಕರ್ನಾಟಕದ ಮೊದಲ ಮೃಗಾಲಯವಾಗಿದೆ.

ಮೃಗಾಲಯದಲ್ಲಿ ಒಟ್ಟು 56 ಜಾತಿಯ (ಪ್ರಬೇಧ) ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿವೆ. 

 

ಶ್ರೀ ಚಾಮರಾಜೇಂದ್ರ ಮೃಗಾಲಯ - ಮೈಸೂರು: 

ಮೈಸೂರು ಮೃಗಾಲಯ ( ಶ್ರೀ ಚಾಮರಾಜೇಂದ್ರ ಮೃಗಾಲಯ ) 1892 ರಲ್ಲಿ ಅಂದಿನ ಮೈಸೂರು ರಾಜ ಚಾಮರಾಜ ಒಡೆಯರ್ 10ನೇ ಅವರಿಂದ ಪ್ರಾರಂಭಿಸಲ್ಪಟ್ಟಿತು. ಆರಂಭದಲ್ಲಿ ಖಾಸಗಿ ಮೃಗಾಲಯವಾಗಿ ಮತ್ತು ಖಾಸ್-ಬಂಗಲೆ ಎಂದು ಹೆಸರಿಸಲಾಯಿತು. ಇದನ್ನು ತಮಾಶಾ ಬಂಗಲೆ ಎಂದೂ ಕರೆಯಲಾಗುತ್ತಿತ್ತು.

ಪ್ರಮುಖ ವಿವರಗಳು:

ಸ್ಥಾಪನೆ: 1892 ರಲ್ಲಿ ಮೈಸೂರು ಮಹಾರಾಜರಾದ ಶ್ರೀ ಚಾಮರಾಜೇಂದ್ರ ಒಡೆಯರ್ ಅವರಿಂದ ಸ್ಥಾಪಿತವಾಯಿತು.

ವಿಸ್ತೀರ್ಣ: ಸುಮಾರು ೧೫೭ ರಿಂದ ೨೫೦ ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ.

ವಿಶೇಷತೆ: ಆಫ್ರಿಕನ್ ಆನೆಗಳು, ಜಿರಾಫೆಗಳು, ಸಿಂಹಗಳು, ಹುಲಿಗಳು ಸೇರಿದಂತೆ ೧೬೦ಕ್ಕೂ ಹೆಚ್ಚು ಪ್ರಭೇದದ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ.

ಈ ಮೃಗಾಲಯವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರ (Zoo Authority of Karnataka) ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರ : 

(ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಒಂದು ಸಂಘ)

ಕರ್ನಾಟಕ ಮೃಗಾಲಯ ಪ್ರಾಧಿಕಾರವು 1960 ರ ಸೊಸೈಟೀಸ್ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

20-07-2002 ರವರೆಗೆ ಮೈಸೂರು ಮೃಗಾಲಯ ಮಾತ್ರ ಕರ್ನಾಟಕದ ಮೃಗಾಲಯ ಪ್ರಾಧಿಕಾರದ ನಿಯಂತ್ರಣದಲ್ಲಿತ್ತು. ಈಗ, ಜುಲೈ 20, 2002 ರಿಂದ ರಾಜ್ಯಾದ್ಯಂತ ವಿಸ್ತರಿಸಲಾಗಿದ್ದು, 8 ಮೃಗಾಲಯಗಳು ಅದರ ವ್ಯಾಪ್ತಿಯಲ್ಲಿವೆ, ಚಿತ್ರದುರ್ಗದ ಆಡುಮಲ್ಲೇಶ್ವರ ಮಿನಿ ಮೃಗಾಲಯವನ್ನು 18-09-2017 ರಿಂದ ZAK ಅಡಿಯಲ್ಲಿ ತರಲಾಗಿದೆ.

ಮೈಸೂರು - ಜಯಚಾಮರಾಜೇಂದ್ರ ಒಡೆಯರ್ ಮೃಗಾಲಯ 

ಬೆಂಗಳೂರು - ಬನ್ನೇರುಘಟ್ಟದ ಜೈವಿಕ ಉದ್ಯಾನವನ

ಶಿವಮೊಗ್ಗ  ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ

ಗದಗ - ಬಿಂಕದಕಟ್ಟೆಯ ಕಿರು ಮೃಗಾಯಲ

ದಾವಣಗೆರೆ - ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯ

ಬೆಳಗಾವಿ - ಕಿತ್ತೂರುರಾಣಿ ಚೆನ್ನಮ್ಮ ನಿಸರ್ಗಧಾಮ

ಬಳ್ಳಾರಿ - ರೇಡಿಯೊ ಪಾರ್ಕ್ ಕಿರು ಮೃಗಾಲಯ

ಗುಲ್ಬರ್ಗ - ಕಿರು ಮೃಗಾಲಯ

ಚಿತ್ರದುರ್ಗ - ಆಡುಮಲ್ಲೇಶ್ವರ ಮಿನಿ ಮೃಗಾಲಯ